೧. ಪೆಟ್ಟು ತಿಂದು ಅತ್ತಿದ್ದಕ್ಕೆ.
೨. ಪೆಟ್ಟು ತಿಂದು ಅಳದಿದ್ದಕ್ಕೆ.
೩. ಪೆಟ್ಟು ಬೇಳುವ ಮುಂಚೆ ಅತ್ತಿದ್ದಕ್ಕೆ.
೪. ಹಿರಿಯರು ಕುಳಿತಿದ್ದಲ್ಲಿ ನಿಂತಿದ್ದಕ್ಕೆ.
೫. ಹಿರಿಯರು ನಿಂತಿದ್ದಾಗ ಕುಳಿತಿದ್ದಕ್ಕೆ.
೬. ಹಿರಿಯರು ಕುಳಿತಿದ್ದಲ್ಲಿ ವಿನಾಕಾರಣ ಸುಳಿದಾಡಿದ್ದಕ್ಕೆ.
೭. ಅತಿಥಿಗಳಿಗಾಗಿ ಸಿದ್ಧಪಡಿಸಿದ್ದ ತಿಂಡಿ ತಿಂದದ್ದಕ್ಕೆ.
೮. ಕೊಟ್ಟ ತಿಂಡಿ ತಿನ್ನದಿದ್ದಕ್ಕೆ.
೯. ಸೂರ್ಯಾಸ್ತದ ನಂತರ ಮನೆಗೆ ಬಂದದ್ದಕ್ಕೆ.
೧೦. ಮಂಕಾಗಿ ಕುಳಿತಿದ್ದಕ್ಕೆ.
೧೧. ಸಿಕ್ಕಾಬಟ್ಟೆ ಉತ್ಸಾಹ ತೋರಿದ್ದಕ್ಕೆ.
೧೨. ಯಾರಿಂದಾದರೂ ಹೊಡೆತ ತಿಂದು ಬಂದರೆ.
೧೩. ಯಾರಿಗಾದರೂ ಹೊಡೆದು ಬಂದರೆ.
೧೪. ನಿಧಾನವಾಗಿ ಊಟ ಮಾಡಿದರೆ.
೧೫. ಗಬಗಬನೆ ಊಟ ಮಾಡಿದರೆ.
೧೬. ಪೂರ್ತಿ ಊಟ ಮಾಡದಿದ್ದರೆ.
೧೭. ನಡೆಯುವಾಗ ಎಡವಿ ಬಿದ್ದರೆ.
೧೮. ಆಡುವಾಗ ಗಾಯ ಮಾಡಿಕೊಂಡರೆ.
೧೯. ಹಿರಿಯರನ್ನು ದೃಷ್ಠಿಸಿ ನೋಡಿದರೆ.
೨೦. ಹಿರಿಯರು ಮಾತನಾಡುವಾಗ ಅವರತ್ತ ಪಿಳಿಪಿಳಿ ನೋಡಿದರೆ.
೨೧. ಹಿರಿಯರು ಮಾತನಾಡುವಾಗ ಅವರತ್ತ ಕಣ್ಣು ಮಿಟುಕಿಸದೇ ನೋಡಿದರೆ.
೨೨. ಯಾರತ್ತಲಾದರೂ ವಾರೆಗಣ್ಣಿನಲಿ ನೋಡಿದರೆ.
೨೩. ಆಟವಾಡಲು ಜೊತೆಗಾರರೊಡನೆ ಸೇರಿಕೊಂಡರೆ.
೨೪. ಆಟವಾಡಲು ಜೊತೆಗಾರರೊಡನೆ ಸೇರಿಕೊಳ್ಳದಿದ್ದರೆ.
೨೫. ಊಟ ಮಾಡಿ ತಟ್ಟೆ-ಲೋಟ ತೊಳೆದಿಡದಿದ್ದರೆ.
೨೬. ತಟ್ಟೆ-ಲೋಟವನ್ನು ಸರಿಯಾಗಿ ತೊಳೆದಿಡದಿದ್ದರೆ.
೨೭. ತಟ್ಟೆ-ಲೋಟವನ್ನು ಬೀಳಿಸಿದರೆ.
೨೮. ಉಗುರು ಕಚ್ಚಿದರೆ.
೨೯. ಸ್ನಾನ ಮಾಡದಿದ್ದರೆ.
೩೦. ಅತಿಬೇಗ ಸ್ನಾನ ಮಾಡಿದರೆ.
೩೧. ಶಾಲೆಯಲಿ ಪೆಟ್ಟು ತಿಂದರೆ.
೩೨. ಗುದ್ದಲಿದ್ದ ವಾಹನದಿಂದ ತಪ್ಪಸಿಕೊಂಡಿದ್ದರೆ!!!
೩೩. ವಾಹನದಿಂದ ಗುದ್ದಿಸಿಕೊಂಡರೆ!!!
೩೪. ಪ್ರಶ್ನಿಸಿದಾಗ ಉತ್ತರಿಸದಿದ್ದರೆ.
೩೫. ಪ್ರಶ್ನಿಸಿದಾಗ ತಿರುಗಿ ಉತ್ತರಿಸಿದರೆ.
೩೬. ಪ್ರಾರ್ಥನೆಗೆ ಬಾರದಿದ್ದರೆ.
ನಾನು ನಾವಾಗಿದ್ದು ಹೀಗೆ.