ಕಾಫಿ ದೇವನೆ

Post Reply
ajaysimha
Posts: 834
Joined: 19 Apr 2018, 18:16

ಕಾಫಿ ದೇವನೆ

Post by ajaysimha »

ಕಾಫಿ ದೇವನೆ..

(ಕಡ್ಡಾಯವಾಗಿ ಕಾಫಿ ಪ್ರಿಯರಿಗೆ ಮಾತ್ರ )

ಕಾಫಿ ದೇವನೆ ದೇಹ ಪಾಲನೆ
ತೇ ನಮೋಸ್ತು ನಮೋಸ್ತು ತೇ
ನೀನು ಬಾರದೆ ಬೆಳಗು ಜಾರದೆ
ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಹೀರಿ ನಿನ್ನನು ಬೆಳಕ ಕಾಣುವೆ
ತೇ ನಮೋಸ್ತು ನಮೋಸ್ತು ತೇ
ಮುಗಿಸಿ ಬೆಳಗಿನ ಕೆಲಸ ನಡೆಯುವೆ
ತೇ ನಮೋಸ್ತು ನಮೋಸ್ತು ತೇ || ಕಾಫಿ ||

ದಿನದ ಕಾಯಕ ಕಾಫಿ ಮಾಯಕ
ತೇ ನಮೋಸ್ತು ನಮೋಸ್ತು ತೇ
ಕುಡಿವ ನಡುವಿನ ಬಿಡುವೆ ಕೆಲಸವೆ
ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಉಣುವ ಮೊದಲಲಿ ಉಂಡ ನಂತರ
ತೇ ನಮೋಸ್ತು ನಮೋಸ್ತು ತೇ
ಕಾಫಿ ಕರದಲಿ ಹಗುರ ಶಿರದಲಿ
ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಸಂಜೆ ಪಡುವಣ ನೋಟ ಕುಡಿದೆನ
ತೇ ನಮೋಸ್ತು ನಮೋಸ್ತು ತೇ
ಕಾಫಿ ಇರದೆಲೆ ನೋಟ ರುಚಿಸದು
ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಮುಗಿಸೆ ಕಾಯಕ ಮನೆಯೆ ಚುಂಬಕ
ತೇ ನಮೋಸ್ತು ನಮೋಸ್ತು ತೇ
ಕಾಫಿ ಹಿಡಿವಳ ಕೋಪ ಮೋಹಕ
ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಜಗಳ ಕದನಕು ಶಾಂತಿ ಮಂತ್ರವು
ತೇ ನಮೋಸ್ತು ನಮೋಸ್ತು ತೇ
ತಲೆಯ ನೋವಿಗು ಕಾಫಿ ತಂತ್ರವು
ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಕಾಫಿ ಪ್ರಿಯರ ಕಾಫಿ ಪದವಿದು
ತೇ ನಮೋಸ್ತು ನಮೋಸ್ತು ತೇ
ನೀತಿ ಗೀತಿಯ ಪಾಠ ಕೇಳದು
ತೇ ನಮೋಸ್ತು ನಮೋಸ್ತು ತೇ || ಕಾಫಿ ||

ಬನ್ನಿ ಕುಡಿಯುವ ಕಾಫಿ ಪೇಯವ
ತೇ ನಮೋಸ್ತು ನಮೋಸ್ತು ತೇ
ಕುಡಿಯ ಬರದವ ಪಾಪಿ ಎನ್ನುವ
ತೇ ನಮೋಸ್ತು ನಮೋಸ್ತು ತೇ || ಕಾಫಿ ||

(ಸ್ವಾಮಿದೇವನೆ ಲೋಕಪಾಲನೆ ಧಾಟಿಯಲ್ಲಿ - ಮೂಲ,

ರಚನೆ. ಶ್ರೀ. ಹಿರೆಮಗಳೂರು ಕಣ್ಣನ್

Post Reply